Release of the Karnataka Forest Department's 2020 calendar




ಕರ್ನಾಟಕ ಅರಣ್ಯ ಇಲಾಖೆಯ 2020ನೇ ಸಾಲಿನ ವಿನೂತನ ಕ್ಯಾಲೆಂಡರ್ ಗಳನ್ನು ವಿಕಾಸಸೌಧದಲ್ಲಿಂದು ಬಿಡುಗಡೆ ಮಾಡಲಾಯ್ತು. ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಸಿ.ಸಿ. ಪಾಟೀಲ್ ರವರು ಕ್ಯಾಲೆಂಡರ್ ಬಿಡುಗಡೆ ಮಾಡಿದರು. ವಿಕಾಸಸೌಧದ 2ನೇ ಮಹಡಿಯಲ್ಲಿರುವ ತಮ್ಮ ಕಛೇರಿಯಾದ ಕೊಠಡಿ ಸಂಖ್ಯೆ 244ರಲ್ಲಿ ಹೊಸ ವರ್ಷದ ಕ್ಯಾಲೆಂಡರ್ ನ್ನು ಸಚಿವರು ಅನಾವರಣಗೊಳಿಸಿದರು. ಅರಣ್ಯ ಇಲಾಖೆಯ ಈ ಬಾರಿಯ ಕ್ಯಾಲೆಂಡರ್ ವಿಶೇಷತೆ ಹೊಂದಿದ್ದು, ಪ್ರತಿ ಪುಟದಲ್ಲೂ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ಇದ್ದು, ಪ್ರತಿ ಪುಟವನ್ನೂ ಒಂದೊಂದು ಪರಿಕಲ್ಪನೆಯಲ್ಲಿ ಮುದ್ರಿಸಲಾಗಿದೆ.  ಮಾಹಿತಿ ಇರುವುದರಿಂದ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಕ್ಯಾಲೆಂಡರ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಸಚಿವರು, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ಯಾಲೆಂಡರ್ ಮುದ್ರಿಸಲಾಗಿದೆ. ಮಾಧ್ಯಮ ಸ್ನೇಹಿತರ ಸಲಹೆಯಂತೆ ವಿವಿಧ ಇಲಾಖೆಗಳಿಗೆ ಕ್ಯಾಲೆಂಡರ್ ಗಳನ್ನು ಕಳುಹಿಸಿ ರೈತರಿಗೂ ಕ್ಯಾಲೆಂಡರ್ ಗಳನ್ನು ನೀಡಲಾಗುವುದು ಎಂದು ಹೇಳಿದರು.  ಈ ವೇಳೆ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಸಂದೀಪ್ ದವೆರವರು, ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು)ಗಳಾದ ಶ್ರೀ ಪುನಾಟಿ ಶ್ರೀಧರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ (ಪ್ರಚಾರ ಮತ್ತು ಐಸಿಟಿ) ಶ್ರೀ ಶಿವರಾಜ್ ಸಿಂಗ್ ರವರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ (ಅಭಿವೃದ್ಧಿ) ಶ್ರೀ ಅಜಯ್ ಮಿಶ್ರಾರವರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ (ವನ್ಯಜೀವಿ ವಿಭಾಗ) ಶ್ರೀ ಸಂಜಯ್ ಮೋಹನ್ ರವರು, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆಡಳಿತ & ಸಮನ್ವಯ) ಶ್ರೀ ಡಾ. ಸಂಜಯ್ ಎಸ್. ಬಿಜ್ಜೂರ್ ರವರು ಸೇರಿದಂತೆ ವಿವಿಧ ವಿಭಾಗಗಳ ಎಪಿಸಿಸಿಎಫ್ ಗಳು ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.


www.aranya.gov.in

2045 Views
 0
 0