Forest Department Sports meet held at Dharwad. Officers Presented awards to winners on the day of closing ceremony



ಧಾರವಾಡದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕೆನರಾ ವೃತ್ತವು ಸಮಗ್ರ ಪ್ರಶಸ್ತಿ ಭಾಜನವಾಗಿದೆ. ಧಾರವಾಡ ಗುಂಗರಗಟ್ಟಿ ಅರಣ್ಯ ಅಕಾಡೆಮಿ ತಂಡ ರನ್ನರ್ಸ್ ಅಪ್ ಆಯಿತು. ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಪಿ.ಎಂ. ಸರಿತಾ ಮತ್ತು ಪುರುಷರ ವಿಭಾಗದಲ್ಲಿ ಧಾರವಾಡದ ಎನ್.ಬಿ. ಉಳ್ಳಾಗಡ್ಡಿ ಅವರಿಗೆ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ಲಭಿಸಿತು. ಪುರುಷ ವಿಭಾಗದ ಕಬಡ್ಡಿ ಸ್ಪರ್ಧೆಯಲ್ಲಿ ಮಂಗಳೂರು ವೃತ್ತ ಪ್ರಥಮ, ಧಾರವಾಡ ವೃತ್ತ ದ್ವಿತೀಯ ಹಾಗೂ ಮಹಿಳೆಯರ ವಿಭಾಗದ ಕಬಡ್ಡಿಯಲ್ಲಿ ಬೆಂಗಳೂರು ವೃತ್ತ ಪ್ರಥಮ, ಗುಂಗರಗಟ್ಟಿಯ ಅರಣ್ಯ ಅಕಾಡೆಮಿ ತಂಡ ದ್ವಿತೀಯ ಸ್ಥಾನ ಪಡೆಯಿತು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಂಗಳೂರು ವೃತ್ತ ಪ್ರಥಮ ಹಾಗೂ ಚಾಮರಾಜನಗರ ವೃತ್ತ ದ್ವಿತೀಯ ಸ್ಥಾನ ಪಡೆಯಿತು. ವಿಜೇತರಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪ್ರಚಾರ ಮತ್ತು ಐಸಿಟಿ)ಗಳಾದ ಶ್ರೀ ಶಿವರಾಜ್ ಸಿಂಗ್ ರವರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ)ಗಳಾದ ಶ್ರೀ ಅಜಯ್ ಮಿಶ್ರಾರವರು ಪ್ರಶಸ್ತಿ ವಿತರಿಸಿದರು.


ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ (ದಿನಾಂಕ: 24.12.2019) ವಿಜೇತ ಸ್ಪರ್ಧಿಗಳಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ (ಪ್ರಚಾರ & ಐಸಿಟಿ) ಶ್ರೀ ಶಿವರಾಜ್ ಸಿಂಗ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ (ಅಭಿವೃದ್ಧಿ ವಿಭಾಗ) ಶ್ರೀ ಅಜಯ್ ಮಿಶ್ರಾ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ (ಕಾಂಪಾ) ಶ್ರೀ ಪುನೀತ್ ಪಾಠಕ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯ ಸಂಪನ್ಮೂಲ ನಿರ್ವಹಣೆ) ಶ್ರೀ ಜಿ.ಎಸ್. ಯಾದವ್ ಪ್ರಶಸ್ತಿ ನೀಡಿದ ಕ್ಷಣ.



aranya.gov.in

138 Views
 0
 0