ಮಡಿಕೇರಿ ಮತ್ತು ಸಂಪಾಜೆಯಲ್ಲಿ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಬಹುಲಕ್ಷ ಬೆಲೆಬಾಳುವ ರೂಬಿ ಸೇರಿದಂತೆ ಇತರೆ ಮೌಲ್ಯಯುತ ಕಲ್ಲುಗಳ ಅಕ್ರಮ ವ್ಯವಹಾರ ಮಾಡುತ್ತಿದ್ದ ದೊಡ್ಡ ಜಾಲವನ್ನು ಬೇಧಿಸಲಾಗಿದೆ. ಖಚಿತ ಮಾಹಿತಿ ಪಡೆದ ಮಡಿಕೇರಿ ಎಸಿಎಫ್ ನೀಲೇಶ್ ಶಿಂಧೆ ನೇತೃತ್ವದಲ್ಲಿ ಮಡಿಕೇರಿ, ಸಂಪಾಜೆ ಮತ್ತು ಭಾಗಮಂಡಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಳಗೊಂಡ ತಂಡ ನಡೆಸಿದ ಈ ಆಪರೇಷನ್ ನಲ್ಲಿ ಇಬ್ಬರನ್ನು ಸೆರೆಹಿಡಿಯಲಾಗಿದೆ. ದಂಧೆಯಲ್ಲಿ ಭಾಗಿಯಾಗಿದ್ದ ಉಳಿದ ಐವರು ತಲೆಮರೆಸಿಕೊಂಡಿದ್ದು, ಅವರಿಗೂ ಬೇಟೆ ಶುರು ಮಾಡಲಾಗಿದೆ. ಆರೋಪಿಗಳಿಂದ ಸುಮಾರು 106 ಕೆಜಿಯಷ್ಟು ಬೆಲೆ ಬಾಳುವ ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ.